ವಿಷಯಕ್ಕೆ ಹೋಗಿ

Top ten Visit to Dakshina Kanada Temples

 ನೀವು ನೋಡಲೇಬೇಕು  ದಕ್ಷಿಣ ಕನ್ನಡ  ಹತ್ತು ಪ್ರಸಿದ್ಧ ದೇವಸ್ಥಾನಗಳು.

1.ಕುದ್ರೋಳಿ ಗೋಕರ್ಣನಾಥ ದೇವಸ್ಥಾನ:

      ಮಂಗಳೂರಿನಲ್ಲಿ ದಸರಾ ಸಮಯದಲ್ಲಿ ಭೇಟಿ ನೀಡಿದ್ರೆ, ದಸರಾ ಹಬ್ಬದ ವಿಶೇಷವಾಗಿ, ದಶಾವತಾರ ದೇವಿಯನ್ನು ನೋಡಬಹುದು ಮತ್ತು ವಿದ್ಯುತ್ ಅಲಂಕಾರದಿಂದ ಮಂಗಳೂರು ಮನಸೆಳೆಯುತ್ತದೆ. ದಸರಾ  ಕೊನೆಯ ದಿನದಂದು ದೇವಿಯ  ಮೆರವಣಿಗೆಯ  ಮತ್ತು 50ಕ್ಕಿಂತ ಹೆಚ್ಚು  ಟ್ಯಾಬ್ಲೋಗಳಲ್ಲಿ ತುಳುನಾಡಿನ ಸಂಸ್ಕೃತಿಕ ಕಾರ್ಯಕ್ರಮಗಳು, ಪ್ರಮುಖವಾಗಿ ಹುಲಿವೇಷ ಮತ್ತು ಯಕ್ಷಗಾನ  ಲಕ್ಷಾಂತರ ಮಂದಿ ನೋಡಿ ಕಣ್ತುಂಬಿಕೊಳ್ಳುತ್ತಾರೆ.#kudroli temple# 

2. ಕದ್ರಿಯ ಮಂಜುನಾಥ ದೇವಸ್ಥಾನ:

        ಈ ದೇವಾಲಯದಲ್ಲಿ ತೀರ್ಥವು  ಕಾಶಿಯಿಂದ ಬರುತ್ತೆ ಎನ್ನುವ ನಂಬಿಕೆ ಇದೆ. ಇಲ್ಲಿ ಏಳು ಕೆರೆಗಳು ತೀರ್ಥ ಸ್ನಾನಕ್ಕೆ
ಪ್ರಸಿದ್ಧ ಆಗಿದೆ.#kadri temple#

3.ಕುತ್ತಾರ್ ಕೊರಗಜ್ಜ ದೇವಸ್ಥಾನ :

       ಕಾರ್ಣಿಕದ ದೇವರೆಂದು ಪ್ರಸಿದ್ಧತೇ ಹೊಂದಿರುವ ಸ್ವಾಮಿ ಕೊರಗಜ್ಜ.ಕುತ್ತಾರ್ ಪದವು ಕೊರಗಜ್ಜನಾ ಮೂಲ ಸ್ಥಳ, ಕಳೆದುಕೊಂಡ ವಸ್ತು ಸಿಗಬೇಕು ಎಂದು  ಕಳೆದುಕೊಂಡವರು ಮೊದಲು ನೆನಪು ಮಾಡುವ ದೇವರೇ ಕೊರಗಜ್ಜ.ಈಗಲೂ ಇಲ್ಲಿ ರಾತ್ರಿ ಸಮಯದಲ್ಲಿ ಚಲ್ಲಿಸುವ ವಾಹನಗಳು ಲೈಟ್ ಹಾಫ್ ಮಾಡಿ ಚಲಿಸುವ ಪದ್ಧತಿ ಇದೆ . #Swami koragajja#


4. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ :

       ದೇವಿಯ ದೇವಸ್ಥಾನಲ್ಲಿ ಪ್ರಸಿದ್ಧಿ  ಹೊಂದಿರುವ ದೇವಸ್ಥಾನದಲ್ಲಿ ಒಂದು. ಈ ದೇವಸ್ಥಾವು ನದಿಯ ಮಧ್ಯ ನಿರ್ಮಾಣವಾಗಿದೆ. ಇಲ್ಲಿ ಮದುವೆಯಾಗದವರು,
ದೇವರ ಸನ್ನಿಧಿಯಲ್ಲಿ ಮದುವೆ ಮಾಡಿಕೊಳ್ಳುತ್ತೇನೆ ಅಂತ ಹರಕೆ ಮಾಡಿದ್ರೆ, ಬೇಗನೆ ಮದ್ವೆ ಸಂಬಂಧ ಕೂಡಿ ಬರುತ್ತೆ ಎಂಬ ನಂಬಿಕೆ ಇದೆ, ಇದರಿಂದ್ದ ಇಲ್ಲಿ ಭೇಟಿ ಕೊಟ್ಟಾಗ  ನವ ಜೋಡಿಯು ದೇವಿಯ  ಮುಂದೆ ಮಾಂಗಲ್ಯ ಕಟ್ಟಿಸಿಕೊಳ್ಳುತ್ತಾರೆ, ಈ ಕ್ಷೇತ್ರದಲ್ಲಿ ಯಕ್ಷಗಾನ   ತುಂಬಾ ಪ್ರಸಿದ್ದಿ ಹೊಂದಿದೆ.# Kateel shri Durgaparameshwari#

5.ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ :

            ಈ ಕ್ಷೇತ್ರದಲ್ಲಿ ದೇವಿಯ ವಿಗ್ರಹವು ವಿಶೇಷ ಮಣ್ಣು ಮತ್ತು ಮರದ ರಸದಿಂದ ನಿರ್ಮಾಣವಾಗಿದೆ.  ಇಲ್ಲಿ ಜಾತ್ರೆಯು  ಒಂದು ತಿಂಗಳು ನಡೆವುದು ವಿಶೇಷ, ಜಾತ್ರೆಯಲ್ಲಿ  ಕಲ್ಲಂಗಡಿಯು ಪ್ರಸಾದವಾಗಿರುತ್ತೆ. ಇಲ್ಲಿ ಪೊಳಲಿ ಚೆಂಡು  ಆಟ ಜಾತ್ರೆ ಸಂದರ್ಭದಲ್ಲಿ ನಡೆವುದು ವಿಶೇಷ.#Polali shri Rajarajeshwari#



6.ಪಣೋಲಿಬೈಲ್ ಕಲ್ಲುರ್ಟಿ ದೇವಸ್ಥಾನ :

       ಈ ಕ್ಷೇತ್ರವು ಸತ್ಯದೇವತೆ ಕಲ್ಲುರ್ಟಿ ಪ್ರಸಿದ್ದಿ. ಕ್ಷೇತ್ರದಲ್ಲಿ ಅಗೆಲು ಸೇವೆ ನೋಡಿದ್ದಾರೆ ಎಷ್ಟು ಕಾರ್ಣಿಕ ಎಂದು ತಿಳಿಯುತ್ತೆ. ಇಲ್ಲಿ ಭಕ್ತರ ಹರಕೆಯ  ಕೋಲಾ ಸೇವೆಯು ನಡೆಯಬೇಕಾದರೆ ವರ್ಷಗಟ್ಟಲ್ಲೇ ಕಾಯಬೇಕು ಅಷ್ಟ್ಟು  ಈ ಕ್ಷೇತ್ರವು ಕಾರ್ಣಿಕದ ದೇವಸ್ಥಾನ.# Panolibail Sathya Devathe kallurti#
 

7. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಉಪ್ಪಿನಂಗಡಿ :

ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಹೆಸರುವಾಸಿ. ಕ್ಷೇತ್ರದಲ್ಲಿ ವಿಶೇಷವಾಗಿ  ಕುಮಾರದಾರ ಮತ್ತು ನೇತ್ರಾವತಿ ನದಿಯು ಸಂಗಮ ಸೇರುವ ಸ್ಥಳ. ಇಲ್ಲಿ ಉದ್ಭವಲಿಂಗವು  ನದಿಯಲ್ಲಿ ಕಾಣಬಹುದು. ಇಲ್ಲಿ ದೇವಿ  ಮಹಾಕಾಳಿ ದೇವಸ್ಥಾನವು ಕಾಣಬಹುದು.#Sahasralingeshwara#mahakali#


8. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ :

        ಈ ಕ್ಷೇತ್ರವು  ಮಕ್ಕಳು ದನ ಕಾಯಕ್ಕೆ ಬಂದವರು  ಕಪಿಲ ನದಿಯ ದಡದಲ್ಲಿ ಸಿಕ್ಕ ಗಣಪತಿ ದೇವರ ವಿಗ್ರಹವನ್ನು ತಂದು ಪೂಜೆ ಮಾಡುತ್ತಾರೆ ಈಗೆ ಸೃಷ್ಟಿಯಾಗಿದೆ ಎಂದು ಇತಿಹಾಸ ಇದೆ. ಕ್ಷೇತ್ರದಲ್ಲಿ ಗರ್ಭಗುಡಿ ಇಲ್ಲ, ಹೊರಂಗಣದಲ್ಲಿ ಕಟ್ಟೆಯನ್ನು ಕಟ್ಟಿ ಮಹಾ ಗಣಪತಿ ಪೂಜೆಯನ್ನು ಮಾಡುತ್ತಾರೆ. ಇಲ್ಲಿ ನೀವು ಬಂದ್ರೆ ಸಾವಿರಾರು ಘಂಟೆಗಳನ್ನು ನೇತಾಕಿ ಇರುವುದನ್ನು ನೋಡಬಹುದು, ಏಕೆಂದರೆ ಭಕ್ತರು ಇಲ್ಲಿ ತನ್ನ ಇಷ್ಟಾರ್ಥ ಸಿದ್ಧಿ ಆದಮೇಲೆ ಘಂಟೆಯನ್ನು ಹರಕೆಯಾಗಿಸಮರ್ಪಿಸುತ್ತಾರೆ.#Southadka Shri Mahaganapathi#


9.ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ :

      ಈ  ಕ್ಷೇತ್ರದಲ್ಲಿ ನಿತ್ಯವು ಸಾವಿರಾರು ಭಕ್ತರನ್ನು ಕಾಣಬಹುದು. ನಾಗ ದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ದೇಶ-ವಿದೇಶದಿಂದ ಬಂದು  ಪೂಜೆ ಸಲ್ಲಿಸುತ್ತರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಪ್ರಮುಖ ಕ್ಷೇತ್ರ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರ ಸಂಖ್ಯೆ ಜಾಸ್ತಿ.
#kukke subramani swami#
 

10. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ  :

       ದಾನ ಧರ್ಮದಿಂದ  ಹೆಸರುವಾಸಿ ಕಾರಣ ಧರ್ಮಸ್ಥಳ ಎಂದು ಹೆಸರು ಬಂದು. ಅಣ್ಣಪ್ಪ ಸ್ವಾಮಿ ಕದ್ರಿಯಿಂದ ಶಿವ ಲಿಂಗ  ತಂದು ಇಲ್ಲಿ ಪ್ರತಿಷ್ಠಾಪನೆ ಮಡಿದ್ದು ಎಂದು ಇತಿಹಾಸ.
ಇಲ್ಲಿ ಯಾವಾಗಲೂ  ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.#Sri  Dharmasthala Manjunatha Swamy#

 Picture credit by Google.
                   

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(UNION Bank of India) ನೇಮಕಾತಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(UNION Bank of India) ಹುದ್ದೆಗಳ ಸಂಖ್ಯೆ: 1500, ಉದ್ಯೋಗ ಸ್ಥಳ: ಭಾರತದಾದ್ಯಂತ ಹುದ್ದೆ: ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಲೋಕಲ್ ಬ್ಯಾಂಕ್ ಆಫೀಸರ್. ಶೈಕ್ಷಣಿಕ ಅರ್ಹತೆ : ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ವಯಸ್ಸಿನ ಮಾನದಂಡ: ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಹುದ್ದೆಗೆ ಅಜಿಸಲ್ಲಿಸಲು, ಅಭ್ಯರ್ಥಿಗಳು 20 ರಿಂದ 30 ವರ್ಷವಯಸ್ಸಿನವರಾಗಿರಬೇಕು. ಗರಿಷ್ಠ ವಯೋಮಿತಿ ಸಡಿಲಿಕೆ:SC/ST ಅಭ್ಯರ್ಥಿಗಳಿಗೆ: 5 ವರ್ಷಗಳುOBC ಅಭ್ಯರ್ಥಿಗಳಿಗೆ: 3 ವರ್ಷಗಳುPwBD (Gen/ EWS) ಅಭ್ಯರ್ಥಿಗಳಿಗೆ: 10 ವರ್ಷಗಳುPwBD (SC/ST) ಅಭ್ಯರ್ಥಿಗಳಿಗೆ: 15 ವರ್ಷಗಳುPwBD (OBC) ಅಭ್ಯರ್ಥಿಗಳಿಗೆ: 13 ವರ್ಷಗಳುಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಸರ್ಕಾರದ ಪ್ರಕಾರ. ಅರ್ಜಿ ಶುಲ್ಕ GEN/EWS/OBC- d. 850/-SC/ST/PwBD ಅಭ್ಯರ್ಥಿಗಳು- ರೂ. 175/- ಸಂಬಳ : 45000-120000 ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ: ಅಭ್ಯರ್ಥಿಯ ಸಾಮಾನ್ಯ ಜ್ಞಾನ,ಯೋಗ್ಯತೆ ಮತ್ತು ಬ್ಯಾ೦ಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಪರೀಕ್ಷಿಸಲು. ಸಂದರ್ಶನ: ಶಾರ್ಟ್‌ಲಿಸ್ಟ್‌ ಮಾಡಿದ ಅಭ್ಯರ್ಥಿಗಳತಮ್ಮ ಸಂವಹನ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ನಿರ್ಣಯಿಸುವ ಫಲಕವನ್ನು ಎದುರಿಸುತ್ತಾರೆ. ಸ್ಥಳ...

ಪ್ರೊ ಕಬಡ್ಡಿ ಸೀಸನ್ 8 ಆರಂಭ, ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ ಗೇ ಸೋಲು...

ಕಬಡ್ಡಿ ಪ್ರಿಯರಿಗೆ ಪ್ರೊ ಕಬಡ್ಡಿ ಸೀಸನ್ 8 ಆರಂಭದಿಂದ ಖುಷಿಯಾಗಿದೆ ಕೊರೋನಾದಿಂದ ಎರಡು  ವರ್ಷ ಪಂದ್ಯ ನಡೆಯಲಿಲ್ಲ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲು ಕಂಡಿದೆ. ಬೆಂಗಳೂರು ಬುಲ್ಸ್ v/ ಯು ಮುಂಬಾ ಪಂದ್ಯ  ಪಾಯಿಂಟ್ಸ್...  ಬೆಂಗಳೂರು ಬುಲ್ಸ್  -30 ಪಾಯಿಂಟ್ಸ್ ಯು ಮುಂಬಾ-46 ಪಾಯಿಂಟ್ಸ್