ನೀವು ನೋಡಲೇಬೇಕು ದಕ್ಷಿಣ ಕನ್ನಡ ಹತ್ತು ಪ್ರಸಿದ್ಧ ದೇವಸ್ಥಾನಗಳು. 1.ಕುದ್ರೋಳಿ ಗೋಕರ್ಣನಾಥ ದೇವಸ್ಥಾನ: ಮಂಗಳೂರಿನಲ್ಲಿ ದಸರಾ ಸಮಯದಲ್ಲಿ ಭೇಟಿ ನೀಡಿದ್ರೆ, ದಸರಾ ಹಬ್ಬದ ವಿಶೇಷವಾಗಿ, ದಶಾವತಾರ ದೇವಿಯನ್ನು ನೋಡಬಹುದು ಮತ್ತು ವಿದ್ಯುತ್ ಅಲಂಕಾರದಿಂದ ಮಂಗಳೂರು ಮನಸೆಳೆಯುತ್ತದೆ. ದಸರಾ ಕೊನೆಯ ದಿನದಂದು ದೇವಿಯ ಮೆರವಣಿಗೆಯ ಮತ್ತು 50ಕ್ಕಿಂತ ಹೆಚ್ಚು ಟ್ಯಾಬ್ಲೋಗಳಲ್ಲಿ ತುಳುನಾಡಿನ ಸಂಸ್ಕೃತಿಕ ಕಾರ್ಯಕ್ರಮಗಳು, ಪ್ರಮುಖವಾಗಿ ಹುಲಿವೇಷ ಮತ್ತು ಯಕ್ಷಗಾನ ಲಕ್ಷಾಂತರ ಮಂದಿ ನೋಡಿ ಕಣ್ತುಂಬಿಕೊಳ್ಳುತ್ತಾರೆ.#kudroli temple# 2. ಕದ್ರಿಯ ಮಂಜುನಾಥ ದೇವಸ್ಥಾನ: ಈ ದೇವಾಲಯದಲ್ಲಿ ತೀರ್ಥವು ಕಾಶಿಯಿಂದ ಬರುತ್ತೆ ಎನ್ನುವ ನಂಬಿಕೆ ಇದೆ. ಇಲ್ಲಿ ಏಳು ಕೆರೆಗಳು ತೀರ್ಥ ಸ್ನಾನಕ್ಕೆ ಪ್ರಸಿದ್ಧ ಆಗಿದೆ.#kadri temple# 3.ಕುತ್ತಾರ್ ಕೊರಗಜ್ಜ ದೇವಸ್ಥಾನ : ಕಾರ್ಣಿಕದ ದೇವರೆಂದು ಪ್ರಸಿದ್ಧತೇ ಹೊಂದಿರುವ ಸ್ವಾಮಿ ಕೊರಗಜ್ಜ.ಕುತ್ತಾರ್ ಪದವು ಕೊರಗಜ್ಜನಾ ಮೂಲ ಸ್ಥಳ, ಕಳೆದುಕೊಂಡ ವಸ್ತು ಸಿಗಬೇಕು ಎಂದು ಕಳೆದುಕೊಂಡವರು ಮೊದಲು ನೆನಪು ಮಾಡುವ ದೇವರೇ ಕೊರಗಜ್ಜ.ಈಗಲೂ ಇಲ್ಲಿ ರಾತ್ರಿ ಸಮಯದಲ್ಲಿ ಚಲ್ಲಿಸುವ ವಾಹನಗಳು ಲೈಟ್ ಹಾಫ್ ಮಾಡಿ ಚಲಿಸುವ ಪದ್ಧತಿ ಇದೆ . #Swami koragajja...
This Blogs Belongs to 100%free online how to make money,news,product motivation, information, health tips, carrier, Technologies updates